ಕಾಮಿಡಿ ಟೈಮ್ ಗಣೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಎಂದು ಪ್ರಸಿದ್ಧರಾಗಿರುವ ಗಣೇಶ್ ಅವರು ಕನ್ನಡ ಚಿತ್ರ ನಟರು. == ಜೀವನ ಚರಿತ್ರೆ == === ಬಾಲ್ಯ ಮತ್ತು ಶಿಕ್ಷಣ === ಇವರು ಹುಟ್ಟಿದ್ದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು ತಮ್ಮ ಕುಟುಂಬದ ತೃತೀಯ ಪುತ್ರ. ಪ್ರಸ್ತುತ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ. ಬಾಲ್ಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ. === ಕಿರುತೆರೆ ಅಭಿನಯ === ಗಣೇಶ್ ಅವರು ಪ್ರಥಮ ಬಾರಿಗೆ ಕ್ಯಾಮರಾವನ್ನು ಎದುರಿಸಿದ್ದು ಗುಟ್ಟು ಸಾಕ್ಷ್ಯಚಿತ್ರದಿಂದ. ಇದರ ಪ್ರಸಾರಣೆಗೆ ನಿರ್ದಿಷ್ಟ ಸಮಯಾವಧಿ ಸಿಗದಿದ್ದರಿಂದ ಅದರ ನಿರ್ಮಾಪಕರು ಅದನ್ನು ಚಿತ್ರ ಪ್ರದರ್ಶನಗಳಲ್ಲಿ ಮತ್ತು ಯು.ಎಸ್.ಎ ಯ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ತುಂಬಾ ನಷ್ಟಕ್ಕೆ ಒಳಗಾದರು. ಈ ಸಾಕ್ಷ್ಯಚಿತ್ರದ ನಿರ್ದೇಶಕರಿಂದಲೇ ಗಣೇಶ್ ಅವರಿಗೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರೆಯಿತು. == ಚಲನಚಿತ್ರಗಳು == 1 ಮುಂಗಾರು ಮಳೆ 2 ಚೆಲ್ಲಾಟ 3 ಗಾಳಿಪಟ 4 ಕೃಷ್ಣ 5 ಮದುವೆ ಮನೆ 6 ಹುಡುಗಾಟ 7 ಸಂಗಮ 8 ಬೊಂಬಾಟ್ 9 ಚೆಲುವಿನ ಚಿತ್ತಾರ 10 ಉಲ್ಲಾಸ ಉತ್ಸಾಹ 11 ರೋಮಿಯೋ 12 ಆಟೋ ರಾಜ 13 ಕೂಲ್ 14 ಮುಂಜಾನೆ 15 ಮುಗುಳುನಗೆ 16 ಸ್ಟೈಲ್ ಕಿಂಗ್ 17 ಶೈಲೂ 18 ಜೂಮ್ 19 ಪಟಾಕಿ 20 ಮಳೆಯಲಿ ಜೊತೆಯಲಿ 21 ಖುಷಿ ಖುಷಿಯಾಗಿ 22 ಏನೋ ಒಂಥರಾ 23 ಮಿಸ್ಟರ್ 420 24 ಚಮಕ್ 25 ದಿಲ್ ರಂಗೀಲಾ 26 ಶ್ರಾವಣಿ ಸುಬ್ರಮಣ್ಯ 27 ಆರೆಂಜ್ 28 ಅರಮನೆ 29 ಸರ್ಕಸ್ 30 ಬುಗುರಿ 31 ಸುಂದರಾಂಗ ಜಾಣ 32 ಸಕ್ಕರೆ 33 ಗೀತಾ 34 ಗಾಳಿಪಟ 2 35 ಬಾನ ದಾರಿಯಲ್ಲಿ 36 ಮುಂಗಾರು ಮಳೆ 2 == ಚಿತ್ರ ಚರಿತ್ರೆ == === ಕಿರುತೆರೆಯಲ್ಲಿ === ಅತ್ತಿಗೆ (ಮೊದಲ ಧಾರಾವಾಹಿ ಅಭಿನಯ) ಯದ್ವಾತದ್ವಾ ಸಾಧನೆ ಸಮಾಗಮ ಭಾಗ್ಯ ವಠಾರ ಹದ್ದಿನ ಕಣ್ಣು ಪ್ರೇಮ ಪಿಶಾಚಿಗಳು ಪಾಪಾ ಪಾಂಡು ಈಶ್ವರಿ === ಟಿ.ವಿ. ಶೋ === ಕಾಮಿಡಿ ಟೈಮ್ === ಚಿತ್ರಗಳಲ್ಲಿ ಕಿರುನಟನೆಗಳು === ಟಪೋರಿ (ಖಳನಾಗಿ ಪ್ರಥಮ ಚಿತ್ರ) ಹುಡುಗಿಗಾಗಿ ಅಹಂ ಪ್ರೇಮಾಸ್ಮಿ ತುಂಟ ಅಮೃತಧಾರೆ ಕೌನ್ ಬನೇಗಾ ಕೊಟ್ಯಾಧಿಪತಿ ಬಾ ಬಾರೋ ರಸಿಕ ಗೇಮ್ ಮಸಾಲ ಓ ಪ್ರಿಯತಮ ಅಬ್ಬಬ್ಬಾ ಎಂಥಾ ಹುಡುಗ === ನಾಯಕ ನಟನಾಗಿ === == ಬಾಹ್ಯ ಸಂಪರ್ಕಗಳು == ಗಣೇಶ್ ಸಂದರ್ಶನೆ ಅಧಿಕೃತ ತಾಣ ಪಾರ್ಶ್ವಚಿತ್ರ 15 2007 ವೇಬ್ಯಾಕ್ ಮೆಷಿನ್ ನಲ್ಲಿ. ಮಾಹಿತಿ 14 2008 ವೇಬ್ಯಾಕ್ ಮೆಷಿನ್ ನಲ್ಲಿ. ಗಣೇಶ್ ಅವರ ಮದುವೆಯ ಚಿತ್ರಗಳು ಗಣೇಶ್ ಅವರ ಆಂಗ್ಲ ಭಾಷೆ ವಿಕಿ